ನಿರ್ಮಲರು -
ಸಿಕ್ಖ್ ಸಾಧುಗಳಲ್ಲಿನ, ಪರಸ್ಪರ ಭಿನ್ನವಾದ ಎರಡು ಪಂಗಡಗಳಲ್ಲೊಂದಕ್ಕೆ ಸೇರಿದವರು. ಇನ್ನೊಂದು ಪಂಗಡದವರನ್ನು ಅಕಾಲಿಗಳೆನ್ನುತ್ತಾರೆ. ಈ ಎರಡು ಪಂಗಡಗಳಿಗೂ ಮೂಲಪುರುಷ ಗುರು ಗೋವಿಂದ ಸಿಂಗ್.

	ನಿರ್ಮಲ ಶಬ್ದದ ಅನ್ವರ್ಥಕತೆಯ ಬಗ್ಗೆ ಅನೇಕ ದಂತಕಥೆಗಳಿವೆ. ನಿಷ್ಕಲಂಕ ಸುಸಂಸ್ಕøತ, ಸೇವಾಧುರೀಣ ಇತ್ಯಾದಿ ಅರ್ಥಗಳನ್ನು ಸಮರ್ಥಿಸುವ ಕಥೆಗಳು ಇಲ್ಲಿ ಅಪ್ರಕೃತ.

	ಈ ಸಾಧುಗಳು ಸೋಲಿ ಎಂಬ ಪ್ರಾಣಾಯಾಮದ ಅನುಷ್ಠಾನ ಮಾಡುತ್ತ ಯೋಗಾಭ್ಯಾಸ ಮಾಡುವುದರಿಂದ ನಿರ್ಮಲ ಶಬ್ದ ಅದನ್ನೇ ಆಧರಿಸಿರಬಹುದೆಂದು ತೋರುತ್ತದೆ.

	ಮೊದ ಮೊದಲು ನಿರ್ಮಲರು ಬಿಳಿಯ ಬಟ್ಟೆಯನ್ನು ಧರಿಸುತ್ತಿದ್ದರೂ ಬರು ಬರುತ್ತ ಕಾವೀ ಬಟ್ಟೆಗಳನ್ನುಡುವುದಕ್ಕೂ ಭಿಕ್ಷಾಟನ ಮಾಡುವುದಕ್ಕೂ ಆರಂಭಿಸಿದರು. ಮಿಕ್ಕ ಸಿಕ್ಖರಂತೆ ಇವರೂ ಕೇಶಧಾರಿಗಳೇ. ಇವರಿಗೆ ತಮ್ಮದೇ ಆದ ಮಠಗಳಿವೆ; ಮಠಗಳಲ್ಲಿ ಇವರ ಗುರುಗಳೂ ಇರುತ್ತಾರೆ. ಇವರು ಹೆಚ್ಚಾಗಿ ಬ್ರಹ್ಮಚರ್ಯವ್ರತವನ್ನು ಆಚರಿಸುತ್ತಾರೆ. ಇವರ ಮಠಗಳಲ್ಲಿ (ಅಖಾರ) ಮುಖ್ಯವಾದವು ಹರಿದ್ವಾರ, ಅಮೃತಸರಗಳಲ್ಲಿವೆ.
(ಕೆ.ಕೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ